ರಂಗನಾಥನ್, ಎಸ್ ಆರ್
1892-1971. ಭಾರತದ ಗ್ರಂಥಾಲಯಗಳ ವ್ಯವಸ್ಥೆಯನ್ನು ಅತ್ಯಂತ ವೈe್ಞÁನಿಕವಾಗಿ ಮತ್ತು ಅರ್ಥಪೂರ್ಣವಾಗಿ ಓರಣಗೊಳಿಸಿದ ಪ್ರಸಿದ್ಧ ಗ್ರಂಥಾಲಯವಿe್ಞÁನಿ. ಇವರು 1892ರ ಆಗಸ್ಟ್ 9ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯ ಶಿಯಾಳಿಯಲ್ಲಿ ಜನಿಸಿದರು. ಶಿಯಾಳಿ ರಾಮಾಮೃತ ರಂಗನಾಥನ್ ಎಂಬುದು ಇವರ ಪೂರ್ಣ ಹೆಸರು. ತಂದೆ ರಾಮಾಮೃತ ಅಯ್ಯರ್, ತಾಯಿ ಸೀತಾಲಕ್ಷ್ಮಿ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು ಬಂಧುಗಳ ಆಶ್ರಯದಲ್ಲಿ ಬೆಳೆದರು. ತಮ್ಮ ಆರಂಭಿಕ ವಿದ್ಯಾಭ್ಯಾಸವನ್ನು ಶಿಯಾಳಿಯ ಹಿಂದೂ ಪ್ರೌಢಶಾಲೆಯಲ್ಲಿ ಮಾಡಿದರು. 1909ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲೂ 1911ರಲ್ಲಿ ಇಂಟರ್‍ಮೀಡಿಯಟ್ ಪರೀಕ್ಷೆಯಲ್ಲೂ ಉತ್ತೀರ್ಣರಾದರು. ಅನಂತರ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದರು (1913). ಗಣಿತಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು ಮದರಾಸು ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದರು (1916). 1917ರಲ್ಲಿ ಎಲ್.ಟಿ. ಪದವಿ ಪಡೆದು ವೃತ್ತಿಜೀವನ ಆರಂಭಿಸಿದರು.

ಮೊದಲಿಗೆ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿ ನೇಮಕವಾದ ಇವರು 1920ರಲ್ಲಿ ಕೊಯಮತ್ತೂರಿನ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಗಿ ಸೇವೆ ಸಲ್ಲಿಸಿದರು. ಅನಂತರ 1921ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ 1924ರವರೆಗೆ ಸೇವೆ ಸಲ್ಲಿಸಿದರು. 1924ರಲ್ಲಿ (ಜನವರಿ 4) ಮದರಾಸು ವಿಶ್ವವಿದ್ಯಾಲಯದ ಗ್ರಂಥಪಾಲಕರಾಗಿ ನೇಮಕವಾಗುವುದರ ಮೂಲಕ ರಂಗನಾಥರ ವೃತ್ತಿಜೀವನ ಹೊಸ ತಿರುವನ್ನು ಪಡೆದುಕೊಂಡಿತು. 

ಗ್ರಂಥಪಾಲಕರಾಗಿ ನೇಮಕರಾದ ಇವರಲ್ಲಿ ಗ್ರಂಥಗಳ ಜೋಡಣೆ ಮತ್ತು ವಿತರಣೆಯ ಬಗ್ಗೆ ಅಪಾರ ಆಸಕ್ತಿ ಇದ್ದುದನ್ನು ಗಮನಿಸಿದ ಮದರಾಸು ವಿಶ್ವಿವಿದ್ಯಾಲಯ ಇವರನ್ನು ಗ್ರಂಥಾಲಯ ತರಬೇತಿಗಾಗಿ ಇಂಗ್ಲೆಂಡಿಗೆ ಕಳುಹಿಸಿ ಕೊಟ್ಟಿತು. 1924 ಸೆಪ್ಟೆಂಬರ್ 24ರಂದು ಇಂಗ್ಲೆಂಡಿನ ಲಂಡನ್ ಸ್ಕೂಲ್ ಆಫ್ ಲೈಬ್ರರಿಯನ್ ಎಂಬ ಶಿಕ್ಷಣ ಸಂಸ್ಥೆಯನ್ನು ಸೇರಿದರು. ಅಲ್ಲಿ ಬೋಧಕರಾಗಿದ್ದ ಬೆರ್‍ವಿಕ್‍ಸೇಯರ್ಸ್ ಎಂಬರ ಆಪ್ತ ಶಿಷ್ಯರಾಗಿ ಗ್ರಂಥಾಲಯ ವಿe್ಞÁನದ ಅಧ್ಯಯನ ಕೈಗೊಂಡರು. ಈ ಸಂದರ್ಭದಲ್ಲಿ ಇಂಗ್ಲೆಂಡಿನ ಅನೇಕ ಗ್ರಂಥಾಲಯಗಳಿಗೆ ಭೇಟಿನೀಡಿ ಆ ಗ್ರಂಥಾಲಯಗಳ ವ್ಯವಸ್ಥೆ, ಆಡಳಿತ, ಜೋಡಣೆ ಕ್ರಮ, ವಿತರಣೆ ವಿಧಾನ ಇತ್ಯಾದಿಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆದರು. ಇದರಿಂದಾಗಿ ಇವರಿಗೆ ಗ್ರಂಥಾಲಯಗಳ ಬಗ್ಗೆ ಒಂದು ಸಮಗ್ರ ಕಲ್ಪನೆ ದೊರೆಯುವಂತಾಯಿತು. ಗ್ರಂಥಾಲಯ ವಿe್ಞÁನದಲ್ಲಿ ಆನರ್ಸ್ ಡಿಪ್ಲೊಮ ಪದವಿ ಪಡೆದುಕೊಂಡರು. ಅನಂತರ ಮದರಾಸಿಗೆ ಹಿಂದಿರುಗಿದ ಇವರು ಮದರಾಸು ವಿಶ್ವವಿದ್ಯಾಲಯದ ಗ್ರಂಥಾಲಯವನ್ನು ತಮ್ಮ ಪ್ರಯೋಗಶಾಲೆಯಾಗಿ ಮಾಡಿಕೊಂಡು, ಗ್ರಂಥಾಲಯ ವ್ಯವಸ್ಥೆಯ ಬಗ್ಗೆ ತಮ್ಮಲ್ಲಿ ಮೂಡಿದ್ದ ಹೊಸ ಕಲ್ಪನೆ, ಆಲೋಚನೆ ವಿಚಾರಗಳಿಗೆ ನಿರ್ದಿಷ್ಟ ರೂಪಕೊಡುವ ಕಾರ್ಯದಲ್ಲಿ ಮಗ್ನರಾದರು. 1931 ರಲ್ಲಿ ಮದರಾಸು ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ಡಿಪ್ಲೊಮ ತರಗತಿಗಳನ್ನು ಆರಂಭಿಸಿದರು.

ರಂಗನಾಥನ್‍ರವರು ಗ್ರಂಥಾಲಯ ವಿe್ಞÁನಕ್ಕೆ ನೀಡಿರುವ ಸೇವೆ ಅತ್ಯಂತ ಅಮೂಲ್ಯವಾದದ್ದು. ಗ್ರಂಥಾಲಯ ಮತ್ತು ಅವುಗಳ ಕಾರ್ಯವಿಧಾನಗಳ ಬಗ್ಗೆ ಸ್ಪಷ್ಟವಾದ ಕಲ್ಪನೆ ಇಲ್ಲದಿದ್ದ ದಿನಗಳಲ್ಲಿ ಇವರು ಗ್ರಂಥಾಲಯಗಳನ್ನು ವೈe್ಞÁನಿಕ ತಳಹದಿಯ ಮೇಲೆ ರೂಪಿಸುವಲ್ಲಿ ಅವಿರತವಾಗಿ ದುಡಿದರು. ಇದರ ಪರಿಣಾಮವಾಗಿ ಫೈವ್ ಲಾಸ್ ಆಫ್ ಲೈಬ್ರಿ ಸೈನ್ಸ್ (ಗ್ರಂಥಾಲಯ ವಿe್ಞÁನದ ಪಂಚ ಸೂತ್ರಗಳು) ಎಂಬ ಕೃತಿ ರಚನೆಯಾಯಿತು. (1931) ಇಂದು ವಿಶ್ವದಾದ್ಯಂತ ಎಲ್ಲ ಗ್ರಂಥಾಲಯಗಳಲ್ಲಿಯೂ ಇವರ ಈ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ಆ ಪಂಚಸೂತ್ರಗಳಿವು. 1. ಗ್ರಂಥಗಳಿರುವುದು ಉಪಯೋಗಿಸಲು. 2. ಪ್ರತಿಯೊಬ್ಬ ಓದುಗನಿಗೂ ಪುಸ್ತಕ. 3. ಪ್ರತಿಯೊಂದು ಪುಸ್ತಕಕ್ಕೂ ಓದುಗ. 4. ಓದುಗನ ಸಮಯ ಉಳಿಸಿ. 5. ಗ್ರಂಥಾಲಯ ಬೆಳೆಯುವ ಜೈವಿಕ ಕ್ರಿಯೆ. ಯಾವುದೇ ಗ್ರಂಥಾಲಯಗಳು ಸಮಂಜಸವಾಗಿ, ಸುವ್ಯವಸ್ಥೆಯಿಂದ ಕಾರ್ಯ ನಿರ್ವಹಿಸಬೇಕಾದರೆ ಈ ಪಂಚಸೂತ್ರಗಳ ಪಾಲನೆ ಅತ್ಯಗತ್ಯ. ಈ ಸೂತ್ರಗಳು ಗ್ರಂಥಾಲಯ ಕಟ್ಟಡ, ಗ್ರಂಥಗಳ ಆಯ್ಕೆ, ಗ್ರಂಥಾಲಯಗಳ ಪ್ರವೇಶ, ಗ್ರಂಥಗಳ ವರ್ಗೀಕರಣ, ಸೂಚೀಕರಣ, ಗ್ರಂಥಗಳ ಪ್ರಚಾರ ಮತ್ತು ಗ್ರಂಥಾಲಯ ಸಿಬ್ಬಂದಿ ಸಾಧನ ಸಲಕರಣೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿದವು.

ಗ್ರಂಥಗಳ ವರ್ಗೀಕರಣಕ್ಕೆ ಸಂಬಂಧಿಸಿದಂತೆ ರಂಗನಾಥನ್ ಅವರು ಒಂದು ಸಿದ್ದಾಂತ ಆಧಾರಿತ ವರ್ಗೀಕರಣ ಪದ್ಧತಿಯನ್ನು ರೂಪಿಸಿದರು. ಅದರ ಫಲವಾಗಿ 1933ರಲ್ಲಿ ಕೋಲನ್ ಕ್ಲಾಸಿಫಿಕೇಶನ್ (ದ್ವಿಬಿಂದು ವರ್ಗೀಕರಣ) ಎಂಬ ಮಹತ್ವದ ಕೃತಿ ಪ್ರಕಟವಾಯಿತು. ಇದರಲ್ಲಿ ಐದು ಮೂಲಭೂತ ವರ್ಗಗಳನ್ನು ಗುರುತಿಸಿ ಎಲ್ಲಾ ವಿಷಯಗಳು ಈ ವರ್ಗಗಳಲ್ಲಿ ಬರುವಂತೆ ಅಳವಡಿಸಿದ್ದಾರೆ. ಆ ಐದು ವರ್ಗಗಳಿವು: 1. ವ್ಯಕ್ತಿತ್ವ, 2. ವಸ್ತು, 3. ಚೇತನ, 4. ಪ್ರದೇಶ, 5. ಕಾಲ ಜೊತೆಗೆ ಉಪವರ್ಗ, ಉಪವರ್ಗಾಂಗ, ಸ್ಥಿತಿಸಂಬಂಧ ಸಪುನರಾವೃತ್ತಿಗಳು ಮತ್ತು ಹಂತಗಳ ಬಗ್ಗೆ ಹೊಸ ಪರಿಕಲ್ಪನೆ ನೀಡಿದ್ದಾರೆ. ಗ್ರಂಥಾಲಯಗಳಲ್ಲಿ ಸೂಚಿಗಳ ಪಾತ್ರ ಮತ್ತು ಮಹತ್ತ್ವವನ್ನು ಅರಿತ ರಂಗನಾಥನ್ ಅವರು ಓದುಗರಿಗೆ ವಿಷಯಾಧಾರಿತ ಬೇಡಿಕೆಗಳನ್ನು ಪೂರೈಸುವ ಸಲುವಾಗಿ ಒಂದು ವರ್ಗೀಕೃತ ಗ್ರಂಥಸೂಚಿ ಪದ್ಧತಿಯನ್ನು ಬಳಕೆಗೆ ತಂದರು. ಇದೇ ವರ್ಗೀಕೃತ ಸೂಚೀಕರಣ ಸಂಹಿತೆ (1934).

ಮದರಾಸು ವಿಶ್ವವಿದ್ಯಾಯದ ಗ್ರಂಥಾಲಯದಲ್ಲಿ ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು 1945ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಗ್ರಂಥಾಲಯವಿe್ಞÁನದ ಮುಖ್ಯಸ್ಥ ಹುದ್ದೆಯನ್ನು ಸ್ವೀಕರಿಸಿ 1947ರ ವರೆಗೆ ಸೇವೆಸಲ್ಲಿಸಿದರು. ಜೊತೆಗೆ ಅನೇಕ ವಿಶ್ವವಿದ್ಯಾಲಯ ಗ್ರಂಥಾಲಯಗಳ ಯೋಜನೆ, ಬೆಳವಣಿಗೆ ಮತ್ತು ವ್ಯವಸ್ಥೆಯ ಬಗ್ಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿದರು. ಗ್ರಂಥಾಲಯಗಳ ಸಾಮಥ್ರ್ಯ, ಸಾರ್ಥಕತೆ, ಉಪಯುಕ್ತತೆ ಮತ್ತು ಜನಪ್ರಿಯತೆಗಳು ಅಲ್ಲಿನ ಸಿಬ್ಬಂದಿವರ್ಗ ಸಲ್ಲಿಸುವ ಸೇವೆಯನ್ನು ಆಧರಿಸಿದೆ ಎಂಬ ಅಭಿಪ್ರಾಯ ಹೊಂದಿದ್ದ ಇವರು ಸಿಬ್ಬಂದಿವರ್ಗದ ಕಾರ್ಯ ಮತು ಸೇವೆಗಳನ್ನು ಉತ್ತಮ ಪಡಿಸಲು ಕಾರ್ಯಮಾನಕ ಮತ್ತು ಸಿಬ್ಬಂದಿ ಸೂತ್ರಗಳನ್ನು ರಚಿಸಿದರು. ಇದು ಗ್ರಂಥಾಲಯ ಸಿಬ್ಬಂದಿವರ್ಗದ ವೇತನಶ್ರೇಣಿ, ಸ್ಥಾನಮಾನ ಮತ್ತು ಸೌಲಭ್ಯಗಳನ್ನು ಕುರಿತದ್ದಾಗಿದೆ.

ದೇಶದಾದ್ಯಂತ ಜನರಿಗೆ ಸಾರ್ವಜನಿಕ ಗ್ರಂಥಾಲಯಗಳ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸಲು ಸರ್ಕಾರ 1941 ರಲ್ಲಿ `ಮಾದರಿ ಸಾರ್ವಜನಿಕ ಗ್ರಂಥಾಲಯ ಕಾಯಿದೆ ಹೊರಡಿಸುವಲ್ಲಿ ಇವರ ಒತ್ತಾಸೆ ಅಪಾರವಾಗಿತ್ತು. ಇದರಿಂದಾಗಿ ರಾಷ್ಟ್ರೀಯ ಗ್ರಂಥಾಲಯ ಪ್ರಾಧಿಕಾರ ರಚನೆಯಾಯಿತು. ಗ್ರಂಥಾಲಯ ವಿe್ಞÁನದಲ್ಲಿ ಸಂಶೋಧನೆ ನಡೆಸಲು ಉನ್ನತಮಟ್ಟದಲ್ಲಿ ಪ್ರಲೇಖನಕಾರರಿಗೆ ತರಬೇತಿ ನೀಡಲು ರಂಗನಾಥನ್ ಅವರು 1962ರಲ್ಲಿ ಬೆಂಗಳೂರಿನಲ್ಲಿ ಪ್ರಲೇಖನ ಸಂಶೋಧನೆ ತರಬೇತಿ ಕೇಂದ್ರ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇದರಿಂದಾಗಿ ಸಾವಿರಾರು ಜನ ಗ್ರಂಥಪಾಲಕರಾಗಿ ತರಬೇತಿ ಪಡೆದು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಸೇವೆ ಸಲ್ಲಿಸಲು ಅನುಕೂಲವಾಯಿತು. ಇಲ್ಲಿ ರಂಗನಾಥನ್ ಗೌರವ ಪ್ರಾಧ್ಯಾಪಕರಾಗಿಯೂ ಸೇವೆಸಲ್ಲಿಸಿದ್ದಾರೆ.
1947ರಲ್ಲಿ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿe್ಞÁನದಲ್ಲಿ ಸ್ನಾತಕೋತ್ತರ ಪದವಿಯನ್ನೂ ಈ ಕ್ಷೇತ್ರದಲ್ಲಿ ಪಿ. ಹೆಚ್.ಡಿ. ಪದವಿ ಪಡೆವ ಸೌಲಭ್ಯವನ್ನೂ ಆರಂಭಿಸಿದ ಕೀರ್ತಿ ರಂಗನಾಥನ್ ಅವರದು. ಇವರು ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಘಸಂಸ್ಥೆಗಳಲ್ಲಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಇಂಡಿಯನ್ ಲೈಬ್ರರಿ ಅಸೋಸಿಯೇಷನ್‍ನ ಅಧ್ಯಕ್ಷ (1954-63). ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಗ್ರಂಥಾಲಯ ಸಮಿತಿಯ ಅಧ್ಯಕ್ಷ, ಇಂಪೀರಿಯಲ್ ಗ್ರಂಥಾಲಯ ಸಮಿತಿಯ ಸದಸ್ಯ (1948-50). ಯುನೆಸ್ಕೋದ ಅಂತಾರಾಷ್ಟ್ರೀಯ ಗ್ರಂಥಸೂಚಿ ಸಮಿತಿಯ ಸದಸ್ಯ (1950-53). ಅಂತಾರಾಷ್ಟ್ರೀಯ ಪ್ರಲೇಖ ಸಂಯುಕ್ತಮಂಡಲದ ವರ್ಗೀಕರಣ ಸಂಶೋಧನ ಆಯೋಗದ ಗೌರವಾಧ್ಯಕ್ಷ - ಹೀಗೆ ಅನೇಕ ಬಗೆಯಲ್ಲಿ ಇವರು ದುಡಿದಿದ್ದಾರೆ. 

ರಂಗನಾಥನ್ ಅವರು ಗ್ರಂಥಾಲಯ ಮತ್ತು ಗ್ರಂಥಾಲಯ ವಿe್ಞÁನ ಕುರಿತು ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ. ಗ್ರಂಥಾಲಯ ವಿe್ಞÁನದಲ್ಲಿ ಇಷ್ಟೊಂದು ಅಪಾರವಾದ ಮತ್ತು ಕೃತಿ ರಚನೆ ಮಾಡಿದವರಲ್ಲಿ ಇವರು ಅಗ್ರಗಣ್ಯರು.

ಫೈವ್ ಲಾಸ್ ಆಫ್ ಲೈಬ್ರಿ ಸೈನ್ಸ್ (1931), ಮಾಡೆಲ್ ಲೈಬ್ರರಿ ಆಕ್ಟ್ (1931), ಕೋಲನ್ ಕ್ಲಾಸಿಫಿಕೇನ್ (1933), ಲೈಬ್ರರಿ ಅಡ್ಮಿನಿಸ್ಟ್ರೇಷನ್ (1935), ಥಿಯರಿ ಆಫ್ ಲೈಬ್ರರಿ ಕೆಟಲಾಗ್ (1938), ಬಿಬ್ಲಿಯಾಗ್ರಫಿ ಆಫ್ ರೆಫೆರೆನ್ ಬುಕ್ಸ್ ಅಂಡ್ ಬಿಬ್ಲಿಯಾಗ್ರಾಫಿಕ್ಸ್ (1941), ಮಾಡೆಲ್ ಪಬ್ಲಿಕ್ ಲೈಬ್ರರಿ (1941), ಸ್ಕೂಲ್ ಅಂಡ್ ಕಾಲೇಜ್‍ಲೈಬ್ರರೀಸ್ (1942), ಲೈಬ್ರರಿ ಕ್ಲಾಸಿಫಿಕೇಶನ್; ಫಂಡಾಮೆಂಟಲ್ ಅಂಡ್ ಪ್ರೊಸೀಜರ್ (1944), ಎಜುಕೇಷನ್ ಫಾರ್ ಲಿಶರ್ (1946), ನ್ಯಾಷನಲ್ ಲೈಬ್ರರಿ ಸಿಸ್ಟಮ್: ಎ ಪ್ಲಾನ್ ಫಾರ್ ಇಂಡಿಯ (1945), ನ್ಯಾಷನಲ್ ಲೈಬ್ರರಿ ಸಿಸ್ಟಮ್ : ಎ ಪ್ಲಾನ್ ಫಾರ್ ಇಂಡಿಯ (1948), ಲೈಬ್ರರಿ ಬುಕ್ ಸೆಲಕ್ಷನ್ (1952), ಯೂನಿವರ್ಸಿಟಿ ರಿಫಾರಂ ಇನ್ ಕಾಂಟೆಂಪೊರರಿ ಇಂಡಿಯ (1952), ಡಸ್ಕ್ರಿಪ್ಟಿವ್ ಅಕೌಂಟ್ ಆಫ್ ಕೋಲನ್ ಕ್ಲಾಸಿಫಿಕೇಶನ್ (1967), ಡಾಕುಮೆಂಟೇಶನ್ : ಜಿನೇಸಿಸ್ ಅಂಡ್ ಡೆವಲಪ್‍ಮೆಂಟ್ (1972), ಪಬ್ಲಿಕ್ ಲೈಬ್ರರಿ ಸಿಸ್ಟಮ್ : ಇಂಡಿಯ, ನೇಪಾಲ, ಶ್ರೀಲಂಕ, ಯು.ಕೆ., ಯುಎಸೆ (1972), ನ್ಯೂ ಎಜುಕೇಶನ್ ಅಂಡ್ ಸ್ಕೂಲ್ ಲೈಬ್ರರೀಸ್ (1973) - ಇವು ಇವರ ಕೆಲವು ಪ್ರಮುಖ ಕೃತಿಗಳು. 

ಗ್ರಂಥಾಲಯ ಮತ್ತು ಗ್ರಂಥಾಲಯ ವಿe್ಞÁನಕ್ಕೆ ನೀಡಿದ ಅಪೂರ್ವ ಸೇವೆಯನ್ನು ಪರಿಗಣಿಸಿ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿದೆ. ದೆಹಲಿ ವಿಶ್ವವಿದ್ಯಾಲಯ (1948), ಪಿಟ್ಸ್‍ಬರ್ಗ್ ವಿಶ್ವವಿದ್ಯಾಲಯ (1964) ಇವರಿಗೆ ಡಿ. ಲಿಟ್. ಪದವಿ ನೀಡಿದೆ. ಭಾರತ ಸರ್ಕಾರ 1957 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. 1970ರಲ್ಲಿ ಅಮೆರಿಕದ ಮಾರ್ಗರೇಟ್ ಮಾನ್ ಪಾರಿತೋಷಕಕ್ಕೆ ಇವರು ಭಾಜನರಾದರು. ಈ ಗೌರವ ಪಡೆದ ಪ್ರಥಮ ಭಾರತೀಯರಿವರು. ಗ್ರಂಥಾಲಯ ವಿe್ಞÁನಕ್ಕೆ ಹೊಸ ತತ್ತ್ವವನ್ನು ರೂಪಿಸಿ ಆಧುನಿಕ ಗ್ರಂಥಾಲಯ ವ್ಯವಸ್ಥೆಯನ್ನು ನಿರ್ಮಾಣ ಮಾಡಿದ ಇವರು 1971 ರಲ್ಲಿ ನಿಧನ ಹೊಂದಿದರು.								
(ಎಚ್.ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ